Blessing of the family




ಕುಟುಂಬಗಳ ಆಶೀರ್ವಚನ


ಪಿತನ, ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ, ಆಮೆನ್.

ಯಾಜಕ: ನಮ್ಮ ಸಹಾಯವು ಸರ್ವೇಶ್ವರನ ನಾಮದಲ್ಲಿರಲಿ
ಎಲ್ಲರು: ಭೂಪರಗಳನ್ನು ಸೃಷಿಸಿದವರು ಅವರೇ.

ಯಾಜಕ: ಪ್ರೀಯರೇ,  ಕುಟುಂಬಗಳನ್ನು ಒಂದುಗೂಡಿಸಿರುವ ದೇವರು ತಮ್ಮೆಲ್ಲರ ಕುಟುಂಬದ ಬಾಂಧವ್ಯವನ್ನು ಶಾಶ್ವತವಾಗಿರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾ ಅವರ ವಾಕ್ಯವನ್ನು ಅಲಿಸೋಣ.

ಕೊಲೊಸ್ಸೆ ೩:೧೨-೧೭
ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು. ದೇವರ ಸ್ವಂತ ಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ಆಭರಣಗಳಾಗಿರಲಿ. ಒಬ್ಬರನ್ನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು ಸಂಪೂರ್ಣಗೊಳಿಸುವ ಬಂಧನ. ನಿಮ್ಮ ಹೃನ್ಮನಗಳು ಕ್ರಿಸ್ತ ಯೇಸುವಿನ ಶಾಂತಿ ಸಮಾಧಾನದಿಂದ ತುಂಬಿರಲಿ. ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ; ಕೃತಜ್ಞತೆ ಉಳ್ಳವರಾಗಿ ಜೀವಿಸಿರಿ. ಕ್ರಿಸ್ತಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿರಿ ಹಾಗೂ ಬುದ್ಧಿ ಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿAದಲೂ ಭಕ್ತಿಗೀತೆಗಳಿಂದಲೂ ಹೃದಯಾಂತರಾಳದಿAದ ದೇವರಿಗೆ ಹಾಡಿರಿ. ನುಡಿಯಲ್ಲಾಗಲೀ ನಡೆಯಲ್ಲಾಗಲೀ ನೀವು ಏನು ಮಾಡಿದರೂ ಯೇಸುಸ್ವಾಮಿಯ ಹೆಸರಿನಲ್ಲಿಯೇ ಮಾಡಿರಿ. ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

ಆಶೀರ್ವಚನ

ಯಾಜಕ: ಓ ದೇವರೇ, ನೀವು ನಮ್ಮನ್ನು ಪ್ರೀತಿಯಿಂದ ಸೃಷ್ಟಿಸಿದ್ದೀರಿ ಮತ್ತು ಕರುಣೆಯಿಂದ ನಮ್ಮನ್ನು ರಕ್ಷಿಸಿದ್ದೀರಿ.
ವಿವಾಹದ ಬಂಧದ ಮೂಲಕ ನೀವು ಕುಟುಂಬವನ್ನು ಸ್ಥಾಪಿಸಿದ್ದೀರಿ.
ಆ ಕುಟುಂಬಗಳು ಧರ್ಮಸಭೆಯಲ್ಲಿ ಕ್ರಿಸ್ತನ ಪ್ರೀತಿಯ ಸಂಕೇತವಾಗಬೇಕೆAದು ಬಯಿಸಿದಿರಿ.
ನಿಮ್ಮ ಹೆಸರಿನಲ್ಲಿ ಇಲ್ಲಿ ಸೇರಿರುವ ಈ ಕುಟುಂಬಗಳನ್ನು ಆಶೀರ್ವದಿಸಿರಿ
ಇವರನ್ನು ಪ್ರೀತಿಯಿಂದ ಸೇರಿಸಿ ಪರಸ್ಪರ ಬೆಂಬಲಿಸಲು ಸಕ್ರೀಯಗೊಳಿಸಿ
ಅವರ ಉತ್ಸಾಹ ಮತ್ತು ಪ್ರಾರ್ಥನೆಯ ಭಕ್ತಿಯಿಂದ ಇತರರ ಅಗತ್ಯಗಳಿಗೆ ಸ್ಪಂದಿಸುವAತೆ ಮಾಡಿರಿ,
ಮತ್ತು ಅವರು ನುಡಿಯುವ ಪ್ರತಿಯೊಂದು ಮಾತಿನಲ್ಲೂ ಮತ್ತು ಮಾಡುವ ಪ್ರತಿಯೊಂದು ಕಾರ್ಯಗಳಲ್ಲೂ ನಿಮ್ಮ ಪುತ್ರ ಯೇಸುವಿಗೆ ಅವರು ಸಾಕ್ಷಿಯಾಗುವವರಂತಾಗಲಿ.
ನಮ್ಮ ಪ್ರಭುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಎಲ್ಲರು: ಆಮೆನ್

ಯಾಜಕ: ನಜರೇತಿನಲ್ಲಿ ತನ್ನ ಪವಿತ್ರ ಕುಟುಂಬದೊAದಿಗೆ ವಾಸಿಸುತ್ತಿದ್ದ ಕರ್ತನಾದ ಯೇಸು, ನಿಮ್ಮ ಕುಟುಂಬಗಳೊAದಿಗೆ ವಾಸಿಸಲಿ, ಅವುಗಳನ್ನು ಎಲ್ಲಾ ಎಡರು ತೊಡರುಗಳಿಂದ ಕಾಪಾಡಲಿ, ಮತ್ತು ನಿಮ್ಮೆಲ್ಲರನ್ನೂ ಹೃನ್ಮನಗಳಲ್ಲಿ ಒಂದಾಗಿರಿಸಲಿ.
ಎಲ್ಲರು: ಆಮೆನ್

-     ತೀರ್ಥ ಪ್ರೋಕ್ಷಣೆ-

ಪ್ರಭುವಿನ ಪ್ರಾರ್ಥನೆ

ಯಾಜಕ: ಪ್ರೀಯರೇ, ನಮ್ಮ ಕುಟುಂಬಗಳಲ್ಲಿ ಕ್ರಿಸ್ತನ ಪ್ರೀತಿ ಮತ್ತು ಶಾಂತಿ ನೆಲೆಸಲು ಮತ್ತು ಕೌಟುಂಬಿಕ ಕರೆಗೆ ಬದ್ಧರಾಗಿರಲು ಪ್ರಭುಕ್ರಿಸ್ತರು ಕಲಿಸಿದ ಪ್ರಾರ್ಥನೆಯನ್ನು ಭಕ್ತಿಯಿಂದ ಹೇಳೋಣ.

ಎಲ್ಲರೂ: ಸ್ವರ್ಗದಲ್ಲಿರುವ ನಮ್ಮ ತಂದೆಯೇ...

ಅ0ತಿಮ  ಆಶೀರ್ವಚನ

ಯಾಜಕ: ಪ್ರಭು ನಿಮ್ಮೊಡನೆ ಇರಲಿ
ಎಲ್ಲರು: ನಿಮ್ಮ ಆತ್ಮದೊಡನೆಯೂ ಇರಲಿ.
ಯಾಜಕ: ಸರ್ವಶಕ್ತ ದೇವರು ನಿಮ್ಮನ್ನು ಪೋಷಿಸಲು ನಿಮ್ಮ ಮಧ್ಯದಲ್ಲೂ, ನಿಮ್ಮನ್ನು ಕಾಪಾಡಲು ನಿಮ್ಮಲ್ಲೂ, ನಿಮಗೆ ದಾರಿ ತೋರಲು ನಿಮ್ಮ ಮುಂದೆಯೂ, ನಿಮಗೆ ಕಾವಲಾಗಿರಲು ನಿಮ್ಮ ಹಿಂದೆಯೂ, ನಿಮ್ಮನ್ನು ಆಶೀರ್ವದಿಸಲು ನಿಮ್ಮ ಮೇಲೆಯೂ ಇರುವವರಾಗಲಿ.
ಸರ್ವಶಕ್ತ ದೇವರಾದ ಪಿತ, ಸುತ ಮತ್ತು ಪವಿತ್ರಾತ್ಮರು ನಿಮ್ಮನ್ನು ಆಶೀರ್ವದಿಸಿ ಸದಾಕಾಲವೂ ಕಾಪಾಡಲಿ.
ಎಲ್ಲರು: ಆಮೆನ್

No comments:

Post a Comment